Thursday, October 21, 2010

ನಿಮಗಿವರು ಗೊತ್ತೇ ? Better you know them..! ( by Jeevan Shetty)



'ಬಡಿಸಿದ ಎಲೆ ಮುಂದೆ ಕೂತು ಅಡಿಗೆಯವರಾರು ? ಎಂದು ಹೇಳುತ್ತಾ ಯಾರಾದರೂ ತೂಕಡಿಸುತ್ತಾರೆಯೇ..? - ರಾಶಿಯವರು ಒಂದು ಕಡೆ ವ್ಯಂಗ್ಯಚಿತ್ರಕಾರರ ಬಗ್ಗೆ ಹೀಗೆ ಹೇಳಿದ್ದಾರೆ. ವ್ಯಂಗ್ಯಚಿತ್ರಗಳನ್ನು ನೋಡುವಾಗ ಅದನ್ನು ಬರೆದವರ ಬಗ್ಗೆ ತಿಳಿದುಕೊಳ್ಳುವುದು ಆ ಕ್ಷಣದಲ್ಲಿ ಸೂಕ್ತವಲ್ಲ. ಆದರೂ ಹಲವು ವರ್ಷಗಳಿಂದ ಸಾವಿರಾರು ವ್ಯಂಗ್ಯ ಚಿತ್ರಗಳನ್ನು ಸೃಷ್ಟಿಸುವ ಹಾಸ್ಯ ಬೃಹ್ಮರ ಪರಿಚಯ ವ್ಯಕ್ತಿಗತವಾಗಿ ಅಗತ್ಯವಲ್ಲವೇ ? ಈ ವ್ಯಂಗ್ಯ ಚಿತ್ರಕಾರರು ಬರೇ ನಗಿಸುವ ಕಾರ್ಯ ಮಾತ್ರವಲ್ಲದೆ ಹಲವಾರು ಸಂದೇಶಗಳನ್ನು ತಮ್ಮ ವ್ಯಂಗ್ಯ ಚಿತ್ರಗಳ ಮೂಲಕ ರವಾನಿಸಿದ್ದಾರೆ. ಕೆಲವು ಸಾಮಾಜಿಕ ಪರಿವರ್ತನೆಗೆ ಕೂಡ ಕಾರಣವಾಗಿರಬಹುದು. ಇದರ ಹಿಂದೆ ಅವರ ಸಾಧನೆ ಅನನ್ಯ!
ಈ ನಿಟ್ಟಿನಲ್ಲಿ ಅವರಿಗೆ ಕೊಡುವ ಗೌರವದ ಸಣ್ಣ ಪ್ರಯತ್ನ ಇಲ್ಲಿ ಮಾಡಲಾಗಿದೆ. ಮೊದಲಿಗೆ ಇತ್ತೀಚೆಗೆ 'ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯ' ಬಗ್ಗೆ ಏರ್ಪಡಿಸಿದ ಸರಣಿ ವ್ಯಂಗ್ಯ ಚಿತ್ರ ಪ್ರದರ್ಶನಗಳಲ್ಲಿ ಭಾಗವಹಿಸಿದ ರಾಜ್ಯದ ಖ್ಯಾತ ವ್ಯಂಗ್ಯ ಚಿತ್ರಕಾರರ ಪರಿಚಯ. ನಂತರ ಉಳಿದವರದು. ಆದರೆ ಅದಕ್ಕಿಂತ ಮುಂಚೆ ಹಿರಿಯ ವ್ಯಂಗ್ಯ ಚೇತನಗಳನ್ನು ಸ್ಮರಿಸಿ ಕೊಳ್ಳುವುದು ನಮ್ಮೆಲ್ಲರ ಕರ್ತವ್ಯ .!!

No comments:

Post a Comment